10 ರೂಪಾಯಿ ತಲೆನೋವು

 

 10 ರೂಪಾಯಿ ತಲೆನೋವು

1000 ಮತ್ತು 500 ರೂಪಾಯಿ ನೋಟುಗಳ ಅಮಾನ್ಯೀಕರಣ  ಸಾರ್ವಜನಿಕರಿಗೆ ಒಂದು ದೊಡ್ಡತಲೆನೋವಾಗಿ ಪರಿಣಮಿಸಿತು ಅದು ಮುಗಿದ ಬಳಿಕವೆ ಮತ್ತೊಂದು ಹೊಸ ತಲೆನೋವು ಶುರುವಾಗಿದೆ ಯಾವುದಪ್ಪ ಅದು ಅಂತೀರಾ..? ಅದೆ 10 ರೂಪಾಯಿ ನಾಣ್ಯ ಈ 10 ರೂಪಾಯಿ ನಾಣ್ಯ ಚಾಲ್ತಿಯಲ್ಲಿದೆಯ ಇಲ್ಲವ ಎಂಬ ಪ್ರಶ್ನೆ ಇನ್ನೂ ಕೆಲವರಲ್ಲಿ ಇದು ಕಳ್ಳ ನಾಣ್ಯ ಎಂಬ ರೀತಿಯಲ್ಲಿ  ಹಾಗೇ ಇದೆ ಆ ಕಾರಣಕ್ಕೆ  ಜನರು ಅದನ್ನು ಅಂಗಡಿಗಳಲ್ಲಿ ಕೋಡುವುದು ಬ್ಯಾಂಕುಗಳಿಗೆ ನೀಡುವುದು ಈ ರೀತಿ ಮಾಡುತ್ತಿದ್ದಾರೆ ಜನ ಸಾಮಾನ್ಯರಿಗೆ ಈ ಪ್ರಶ್ನೆಯನ್ನ ಕೇಳಿದರೆ ಯಾಕೆ 10 ರೂ ನಾಣ್ಯಗಳನ್ನ ಬಳಸುವುದಿಲ್ಲಾ ಎಂದರೆ ಬೇರೆ ಜನಗಳು ಅದನ್ನು ಬಳಸುವುದಿಲ್ಲಾ ಬ್ಯಾಂಕಿನಲ್ಲಿ ಕೂಡ ತೆಗೆದು ಕೋಳ್ಳುವುದಿಲ್ಲಾ ಆಗಾಗಿ ಬಳಸುವುದಿಲ್ಳಾ ಎನ್ನುತ್ತಾರೆ ಅದರೆ ಈ ನಾಣ್ಯ ಚಾಲ್ತಿಯಲ್ಲಿದೆ ಇದರ ಬಗ್ಗೆ ತಿಳುವಳಿಕೆ ಇಲ್ಲಾ ಇದನ್ನು ತಿಳಿಸುವ ತಿಳಿದಿರುವವರು ಮಾಡುತ್ತಿಲ್ಲಾ ಬ್ಯಾಂಕುಗಳಲ್ಲೂ ಈ ಕೆಲಸ ಆಗುತ್ತಿಲ್ಲಾ  ಅದರಿಂದ ಈ ನಾಣ್ಯಗಳು ಕೆಲವು ಅಂಗಡಿಗಳ ಗಲ್ಲಪೆಟ್ಟಿಗೆಯಲ್ಲಿ ಭದ್ರವಾಗಿದೆ ಅದರೇ ಅದು ಎಲ್ಲೆಡೆ ಹರಿದು ಚಾಲ್ತಿಯಲ್ಲಿರಬೇಕು ಈ ಕೆಲಸವನ್ನ ಮಾಡುವುದು ಸರ್ಕಾರದ ಮತ್ತು ನಮ್ಮ ಆದ್ಯ ಕರ್ತವ್ಯವಾಗಿದೆ